ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ
ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ೭೫ನೇ ವರ್ಧಂತಿ ಮಹೋತ್ಸವದ ಅಂಗವಾಗಿ 'ವಜ್ರೋತ್ಸವ ಭಾರತೀ' ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರ ಅಭ್ಯುದಯಕ್ಕಾಗಿ, ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಪ್ಪಣೆಯಂತೆ ಶ್ರೀಮಠದ ವತಿಯಿಂದ ರಿಯಾಯಿತಿ ದರದಲ್ಲಿ ಪ್ರಸಾದ ರೂಪವಾಗಿ ೭೫ ಆಟೋ ರಿಕ್ಷಾ ವಿತರಿಸುವ ಕಾರ್ಯಕ್ರಮವನ್ನು ಘೋಷಣೆ ಮಾಡಲಾಗಿತ್ತು. ಅದರಂತೆ ಶೃಂಗೇರಿ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಈ ಆಟೋ ರಿಕ್ಷಾಗಳನ್ನು ವಿತರಿಸಲಾಗುವುದು.
ಈ ಯೋಜನೆಯಡಿ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ನಿಬಂಧನೆಗಳನ್ನು ಸರಿಯಾಗಿ ಓದಿ, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಖುದ್ಧಾಗಿ ಬಂದು 05-03-2026ರ ಒಳಗಾಗಿ ಆಡಳಿತಾಧಿಕಾರಿಗಳ ಕಛೇರಿಯ ಲೆಕ್ಕ-ಪತ್ರ ವಿಭಾಗದಲ್ಲಿ ಸಲ್ಲಿಸಬೇಕು.

